Make Money Online : Click here

Wednesday, December 31, 2008

Kannada SMS - ಒಂದು ಸುಂದರ ಪ್ರೊಪೋಸಲ್ ಕವನ

ಒಂದು ಸುಂದರ ಪ್ರೊಪೋಸಲ್ ಕವನ .....

.

ನಯನವು ನೀ ಆಗುವುದಾದರೆ - ನೋಟ ನಾನಾಗುವೆ.
ಹೃದಯದಿ ನೆಲಸುವುದಾದರೆ - ಬಡಿತವು ನಾನಾಗುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?


.

ಹಕ್ಕಿಯಂತೆ ಹಾರುವುದಾದರೆ -ರೆಕ್ಕೆಯಾಗಿ ನಾನಿರುವೆ.
ನೀ ಮನಸಾದರೆ - ನಾ ನಿನ್ನ ಕನಸಾಗುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?

.

ಹೆಜ್ಜೆ ಹಾಕುವ ಆಸೆ ಇದ್ದರೆ - ಗೆಜ್ಜೆಯಾಗಿ ನಲಿಯುವೆ.
ಹಾಡು ಹೇಳುವ ಬಯಕೆ ಇದ್ದರೆ - ತಾಳ ಹಾಕುತ ಕೂಡುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?

.

ಮರವಾಗಿ ನೀ ನಿಲ್ಲುವುದಾದರೆ - ನೆರಳಾಗಿ ನಾ ನಿನ್ನ ಜೊತೆ ಸೇರುವೆ.
ಹೂವಾಗಿ ಅರಳುವುದಾದರೆ - ಕಂಪಾಗಿ ನಿನ್ನ ಸೇರುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?

.

ಗಾಳಿಯಾಗಿ ನೀ ಬೀಸುವುದಾದರೆ - ತಂಪನ್ನು ನಾ ನೀಡುವೆ.
ಮಳೆಯಾಗಿ ಸುರಿಯುವೆಯ ಹೇಳು - ಹನಿಯಾಗಿ ಜೊತೆ ಬರುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?

.

ಬದುಕಾಗಿ ಇರುವುದಾದರೆ - ಉಸಿರಾಗಿ ನೆರವಾಗುವೆ.
ಹಣ್ಣಾಗಿ ಸಿಗುವುದಾದರೆ - ರುಚಿಯಾಗಿ ನಾ ನಿನ್ನ ಒಡಲ ಸೇರುವೆ.

ಹೇಳು ನೀ ನನ್ನ
ನಿನ್ನವಳಾಗಿಸಿ ಕೊಳ್ಳುವೆಯ?

-- ಕವಿತ